ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
``ನೃತ್ಯ, ಅಭಿನಯ, ಸಂಗೀತವೆಲ್ಲವಿರುವ ಅದ್ಭುತ ಕಲೆ ಯಕ್ಷಗಾನ`` : ಫ್ರಾನ್ಸ್ ಪ್ರಜೆಗಳ ಉದ್ಗಾರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 21 , 2013
ಸೆಪ್ಟೆ೦ಬರ್ 22 , 2013

``ನೃತ್ಯ, ಅಭಿನಯ, ಸಂಗೀತವೆಲ್ಲವಿರುವ ಅದ್ಭುತ ಕಲೆ ಯಕ್ಷಗಾನ`` : ಫ್ರಾನ್ಸ್ ಪ್ರಜೆಗಳ ಉದ್ಗಾರ

ಮಂಗಳೂರು : 'ನೃತ್ಯ, ಅಭಿನಯ, ಸಂಗೀತ, ಸಂಭಾಷಣೆ ಎಲ್ಲವನ್ನೂ ಹೊಂದಿದ ಯಕ್ಷಗಾನ ಅದ್ಭುತ ರಂಗ ಕಲೆ...''ಹಾಡುಗಾರಿಕೆ, ಸಂಭಾಷಣೆ, ಕಥೆ ಅರ್ಥವಾಗದಿದ್ದರೂ, ಯಕ್ಷಗಾನದ ವೇಷಭೂಷಣಗಳು ಗಮನ ಸೆಳೆಯಿತು...'

ಹೀಗೆಂದು ಉದ್ಘರಿಸಿದವರು ಫ್ರಾನ್ಸ್‌ನ ಲಿಯಾನ್ ಎಂಬ ಊರಿನಿಂದ ಭಾರತೀಯ ಉಡುಪು, ರಂಗಭೂಮಿ ವೇಷಭೂಷಣ, ಒಟ್ಟು ಭಾರತೀಯರ ರಿಸು ಕುರಿತು ಅಧ್ಯಯನಕ್ಕೆ ಆಗಮಿಸಿದ ಸಿಂಡಿ ಲೊಂಬಾರ್ಡಿ ಮತ್ತು ಕ್ಯಾರೊಲ್ ನೆಬಿರಾನ್.

ಕೆರೆಮನೆ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಮಂಗಳೂರು ಪುರಭವನದಲ್ಲಿ ಶನಿವಾರ ನಡೆದ ಶ್ರೀಮಯ ಯಕ್ಷತ್ರಿವೇಣಿಯಲ್ಲಿ 'ವಾಲಿಮೋಕ್ಷ' ಯಕ್ಷಗಾನ ವೀಕ್ಷಿಸಿದ ಬಳಿಕ ಅವರು ವಿಜಯಕರ್ನಾಟಕ ಜತೆ ಮಾತನಾಡಿದರು.

ಕಳೆದ ಮೂರು ತಿಂಗಳಿನಿಂದ ಕೇರಳ, ತಮಿಳ್ನಾಡು ಮತ್ತು ಕರ್ನಾಟಕದಲ್ಲಿ ಕಾಸ್ಟ್ಯೂಮ್ ಕುರಿತು ಅಧ್ಯಯನ ನಿರತರಾಗಿರುವ ಅವರು, ಯಕ್ಷಗಾನ ವೀಕ್ಷಿಸುವ ಜತೆಗೆ ವೇಷಭೂಷಣದ ಚಿತ್ರವನ್ನು ಪುಸ್ತಕದಲ್ಲಿ ಚಿತ್ರಿಸಿ ದಾಖಲೀಕರಿಸಿದರು.

ಫ್ರಾನ್ಸ್‌ನ ಲೋಕಡಾರ್ಮಿ ಥಿಯೇಟರ್ ಕಾಸ್ಟ್ಯೂಮ್ ಡಿಸಾನ್ ಮೂಲಕ ಭಾರತದಲ್ಲಿ ಇಂಟರ್ನ್‌ಶಿಪ್‌ಗಾಗಿ ಆಗಮಿಸಿರುವ ಅವರು ಈಗಾಗಲೇ ಮೂರು ತಿಂಗಳ ಅಧ್ಯಯನ ಪೂರೈಸಿ ಮುಂದಿನ ವಾರ ಹಿಂದಿರುಗಲಿದ್ದಾರೆ.

ಕಾಸರಗೋಡಿನ ಯಕ್ಷಗಾನ ಗೊಂಬೆ ಕುಣಿತ ಕಲಾವಿದ ಕೆ.ವಿ.ರಮೇಶ್ ಅವರಲ್ಲಿಗೆ ಆಗಮಿಸಿ ಯಕ್ಷಗಾನದ ಗೊಂಬೆಗಳ ಅಧ್ಯಯನ ನಡೆಸಿ, ಯಕ್ಷಗಾನ ಪ್ರದರ್ಶನ ನೋಡುವ ಉತ್ಸಾಹದೊಂದಿಗೆ ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಜತೆಗೆ ಮಂಗಳೂರಿಗೆ ಆಗಮಿಸಿದ್ದರು.

ಫ್ರಾನ್ಸ್‌ನ ಮನೋರಂಜನಾ ಪ್ರದರ್ಶನದಲ್ಲಿ ಕೇವಲ ಸಂಗೀತ ಅಥವಾ ನೃತ್ಯ ಅಥವಾ ಅಭಿನಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಯಕ್ಷಗಾನ ಅವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ತೋರಿಸುವ ಮೂಲಕ ಮನೋರಂಜನಾತ್ಮಕವಾಗಿತ್ತು ಎನ್ನುತ್ತಾರೆ ಸಿಂಡಿ ಲೊಂಬಾರ್ಡಿ.

ಯಕ್ಷಗಾನ ಪ್ರದರ್ಶನದ ಬಳಿಕ ಕೆರೆಮನೆ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರ ಬಳಿ ಚೌಕಿಗೆ ತೆರಳಿ ವೇಷಭೂಷಣಗಳ ಮಾಹಿತಿಯನ್ನು ಕೂಡಾ ಅವರು ಪಡೆದರು.

ಸನ್ಮಾನ: ಕೆರೆಮನೆ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಶಾರದಾ ವಿದ್ಯಾಲಯ ಸಮೂಹ ಸಂಸ್ಥೆ ಅಧ್ಯಕ್ಷ ಎ.ಬಿ. ಪುರಾಣಿಕ್ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಶ್ರೀಕೃಷ್ಣ ಯಕ್ಷಸಭಾ ಅಧ್ಯಕ್ಷ ಕೆ.ಎಸ್.ಕಲ್ಲೂರಾಯ, ಮೂಡುಬಿದರೆ ಆಳ್ವಾಸ್ ಕಾಲೇಜು ಪ್ರಾಧ್ಯಾಪಕ ಆದಿತ್ಯ ಭಟ್, ನಿರಂಜನ ಹೆಗಡೆ, ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಉಪಸ್ಥಿತರಿದ್ದರು.

ಕಲಾವಿದ ರವಿ ಅಲೆವೂರಾಯ ಅಭಿನಂದನೆ ನೆರವೇರಿಸಿದರು. ಕೆರೆಮನೆ ನರಸಿಂಹ ಹೆಗಡೆ ಸ್ವಾಗತಿಸಿ, ವಂದಿಸಿದರು. ಸುಧಾಕರ ರವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ